ಇನ್ನೇನು ಒಂದು ವಾರದಲ್ಲಿ ವಿಶ್ವಕಪ್ ಕ್ರಿಕೆಟ್ ಆರಂಭವಾಗಲಿದೆ. ಕ್ರಿಕೆಟ್ ಆಡುವ ರಾಷ್ಟ್ರಗಳು ಕಡಿಮೆ ಇದ್ದರೂ, ಅದು ಭಾರತದಲ್ಲಿ, ಕ್ರಿಕೆಟ್ ಆಡುವ ರಾಷ್ಟ್ರಗಳಲ್ಲಿ ಹುಟ್ಟಿಸುವ craze ಮಾತ್ರ ಬೇರೆ ಎಲ್ಲಾ ಆಟಗಳಿಗಿಂತ ಜಾಸ್ತಿ.
ಹದಿನಾಲ್ಕು ವರ್ಷಗಳ ನಂತರ ವಿಶ್ವಕಪ್ ಭಾರತದಲ್ಲಿ ನಡೆಯುತ್ತಿದೆ. ಭಾರತದ ಜೊತೆ ಶ್ರೀಲಂಕ ಮತ್ತು ಬಾಂಗ್ಲಾದೇಶ ಕೂಡ ಕೆಲವೊಂದು ಪಂದ್ಯಗಳ ಆತಿಥ್ಯ ವಹಿಸುತ್ತಿವೆ. ಧೋನಿ ನಾಯಕತ್ವದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಮತ್ತು ಏಕದಿನ ಕ್ರಿಕೆಟ್ ನಲ್ಲಿ ಎರಡನೆಯ ಸ್ಥಾನದಲ್ಲಿರುವ ಭಾರತ ಈ ಬಾರಿಯ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಕಳೆದ ಬಾರಿಯ champion ಆಸ್ಟ್ರೇಲಿಯಾ ಈಗ ದುರ್ಭಲವಾಗಿದೆ. ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಕೂಡ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿವೆ.
ನಮ್ಮ ಬೆಂಗಳೂರಿನಲ್ಲಿ ಭಾರತಕ್ಕೆಇಂಗ್ಲೆಂಡ್ ಜೊತೆಗಿನ ಪಂದ್ಯ ಅದೃಷ್ಟವಶಾತ್ಆಗಿ ಸಿಕ್ಕಿದೆ. ಕೊಲ್ಕತ್ತಾದಲ್ಲಿ ನಡೆಯಬೇಕಾಗಿದ್ದ ಪಂದ್ಯ ICC ನಿರ್ದೇಶನದಂತೆ ಬೆಂಗಳೂರಿಗೆ ಸ್ಥಳಾಂತರವಾಗಿರುವುದು ಕನ್ನಡಿಗರಿಗೆ ಸಂತಸ ತಂದಿದೆ.
ಹದಿನಾಲ್ಕು ವರ್ಷಗಳ ಹಿಂದೆ ವಿಶ್ವಕಪ್ ನ quarter final ಭಾರತ ಮತ್ತು ಪಾಕಿಸ್ತಾನದ ಮದ್ಯೆ ಬೆಂಗಳೂರಿನಲ್ಲಿ ನಡೆದಿತ್ತು. ಭಾರತ ಮತ್ತು ಪಾಕಿಸ್ತಾನ್ ಪಂದ್ಯ ಅಂದ್ರೆ ಕೇಳಬೇಕಾ? ಅಂದು ಪಾಕಿಸ್ತಾನದ ಆಮೀರ್ ಸೋಹೈಲ್ ನಮ್ಮ ವೆಂಕಟೇಶ್ ಪ್ರಸಾದ್ ಗೆ ಬೌಂಡರಿ ಹೊಡೆದು, ಮುಂದಿನ ಬಾಲಿನಲ್ಲಿ ಕೂಡ ಇದೇ ರೀತಿ ಬೌಂಡರಿ ಹೊಡೆಯುವೆ ಎಂದಿದ್ದು , ಪ್ರಸಾದ್ ಮುಂದಿನ ಚೆಂಡಿನಲ್ಲಿ ಸೋಹೈಲ್ ನನ್ನು ಬೌಲ್ಡ್ ಮಾಡಿದ್ದೂ ಎಲ್ಲರ ಕಣ್ಣುಗಳಲ್ಲಿ ಇನ್ನೂ ಹಚ್ಚ ಹಸಿರಾಗಿದೆ. ಇಂತಹ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಲಿಷ್ಠ ತಂಡಗಳಾದ ಭಾರತ ಮತ್ತು ಇಂಗ್ಲೆಂಡ್ ಪಂದ್ಯ ನಡೆಯುತ್ತಿರುವುದು ಕನ್ನಡಿಗರ ಅದೃಷ್ಟವೆ ಸರಿ. ಆದರೆ ಭಾರತ ತಂಡದಲ್ಲಿ ಯಾವೊಬ್ಬ ಕನ್ನಡಿಗನೂ ಇರದಿರುವುದು ಎಲ್ಲರಲ್ಲಿ ಬೇಸರ ಮೂಡಿಸಿದೆ. ಕೊನೆಯ ಹಂತದಲ್ಲಿ ಆಯ್ಕೆಯಾದ ಶ್ರೀಶಾಂತ್ ಬದಲು ನಮ್ಮ ವಿನಯ್ ಕುಮಾರ್ ಆಯ್ಕೆ ಯಾಗಿದ್ದಾರೆ ಚೆನ್ನಾಗಿರುತ್ತಿತ್ತು.
ಈ ವಿಶ್ವಕಪ್ ಬಹುಶ: ಸಚಿನ್ ತೆಂಡೂಲ್ಕರ್ ಗೆ ಕೊನೆಯ ವಿಶ್ವಕಪ್. ಬ್ಯಾಟಿಂಗ್ ನ ಎಲ್ಲಾ records ಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡಿರುವ ಸಚಿನ್ ಗೆ, ಈ ವಿಶ್ವಕಪ್ ಗೆದ್ದು ಕೊಡಬೇಕೆಂಬುವುದು ತಂಡದ ಎಲ್ಲಾ ಆಟಗಾರರ ಗುರಿಯಾಗಿದೆ .
೧೯೮೩ ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದಿದ್ದು ಮತ್ತು ಧೋನಿ ನಾಯಕತ್ವದಲ್ಲಿ T ೨೦ ವಿಶ್ವಕಪ್ ಗೆದ್ದಿರುವುದು ಬಿಟ್ಟರೆ ಮತ್ತೊಂದು ವಿಶ್ವಕಪ್ ಗೆದ್ದಿಲ್ಲಾ.
ಪ್ರತಿ ಬಾರಿ ವಿಶ್ವಕಪ್ ಗಿಂತ ಮೊದಲು ಫೇವರಿಟ್ ಅಂತ ಕರೆಸಿಕೊಳ್ಳುವ ಭಾರತ, ಈ ಬಾರಿಯಾದರೂ ವಿಶ್ವಕಪ್ ಗೆದ್ದು ಭಾರತೀಯರಿಗೆ ಖುಷಿ ಮತ್ತು Master Blaster ಸಚಿನ್ ಗೆ dream farewell ಕೊಡಲಿ.
All the best INDIA..........