Aug 28, 2011
Aug 18, 2011
ವಿಜಾಪುರ
ಮೊನ್ನೆಯಷ್ಟೇ ವಿಜಾಪುರದಿಂದ ಬಂದೆ... ನನ್ನ ತಂದೆಗೆ ವಿಜಾಪುರಕ್ಕೆ ವರ್ಗವಾಗಿರುವ ಕಾರಣ ನನಗೆ ವಿಜಾಪುರ ನೋಡಲು ಅವಕಾಶ ಸಿಕ್ಕಿದೆ ಜೊತೆಗೆ ಅಲ್ಲಿನ ಇತಿಹಾಸ ಪ್ರಸಿದ್ದ ಸ್ಮಾರಕಗಳನ್ನು ನೋಡುವ ಅವಕಾಶ ಕೂಡ ಸಿಕ್ಕಿದೆ.
ಹಿಂದೆ '' ವಿಜಯಪುರ '' ಎಂದು ಕರೆಸಿಕೊಂಡ ವಿಜಾಪುರವನ್ನು '' ಕಲ್ಯಾಣದ ಚಾಲುಕ್ಯರು '' ಸ್ಥಾಪಿಸಿದರು. ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಗಾದ ವಿಜಾಪುರ ನಂತರ ಮರಾಠ ಮತ್ತು ಬ್ರಿಟಿಷರ ಕೈಗೆ ಬಂತು.
ಇದು ಕರ್ನಾಟಕದ ಗಡಿ ಭಾಗವಾಗಿದ್ದು. ಮಹಾರಾಷ್ಟ್ರದೊಂದಿಗೆ ಗಾಡಿಯನ್ನು ಹಂಚಿಕೊಂಡಿದೆ. ಈ ಜಿಲ್ಲೆಯಲ್ಲಿ ೫ ನದಿಗಳು ಹರಿಯುವದರಿಂದ ಇದಕ್ಕೆ '' ಪಂಚನದಿಗಳ ಬೀಡು '' ಎಂದು ಕರೆಯುತ್ತಾರೆ.
'' ಕಾಯಕವೇ ಕೈಲಾಸ '' ಎಂದ ಬಸವಣ್ಣ ಹುಟ್ಟಿದ ಊರು ಬಸವನ ಬಾಗೇವಾಡಿ ವಿಜಾಪುರದಲ್ಲಿದೆ.
ಇಲ್ಲಿನ ಇತಿಹಾಸ ಪ್ರಸಿದ್ದ ಸ್ಥಳಗಳು ಇಂತಿವೆ :
ಗೋಲ್ ಗುಂಬಜ್ : ಇದು ಮಹಮದ್ ಆದಿಲ್ ಶಾ ಗೋರಿಯಾಗಿ ಕಟ್ಟಲಾದ ಸ್ಮಾರಕ. ಇದು ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್. ಇದರ ವಿಶೇಷ ಆಕರ್ಷಣೆಯೆಂದರೆ ಇದರೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುತ್ತದೆ.
ಇತರ ಆಕರ್ಷಣೆಗಳು : ಇಬ್ರಾಹಿಮ್ ರೌಜಾ, ಬಾರಾ ಕಮಾನು, ಸಂಗೀತ ಮಹಲ್.
ಹೆಚ್ಚಿನ ಚಿತ್ರಗಳನ್ನು ನೋಡಲು ಈ ಲಿಂಕನ್ನು ಕ್ಲಿಕ್ಕಿಸಿ
Subscribe to:
Posts (Atom)