Dec 23, 2012

ಸಚಿನ್ ಗೊಂದು ಸಲಾಂ

ಕ್ರಿಕೆಟ್ ಆಡಲೆಂದೇ ಹುಟ್ಟಿ, ಕ್ರಿಕೆಟ್ ಆನ್ನೇ ಉಸಿರಾಗಿಸಿ, ಅದ್ಭುತ ಆಟದ ಮೂಲಕ ಭಾರತಕ್ಕೆ ಅನೇಕ ಅಮೋಘ ಗೆಲುವು ತಂದುಕೊಟ್ಟ ಸಚಿನ್ ಗೊಂದು ಸಲಾಂ.
ಅತಿ ಚಿಕ್ಕ ವಯಸ್ಸಲ್ಲೇ ಕ್ರಿಕೆಟ್ ಆಡಲು ಶುರುಮಾಡಿ, ಕಾಲೇಜು ಮೆಟ್ಟಿಲು ಹತ್ತುವ ವಯಸ್ಸಲ್ಲೇ ಈ ದೇಶದ " Youth Icon " ಆದಿರಿ. ಕ್ರಿಕೆಟ್ ನಲ್ಲಿ ಅಷ್ಟೊಂದು ಯಶಸ್ಸುಗಳಿಸಿದರೂ, ಅದನ್ನು ತಲೆಗೆ ಹತ್ತಿಸಿಕೊಳ್ಳದೆ ಕ್ರಿಕೆಟ್ ಅನ್ನಷ್ಟೇ ಆಡಿದಿರಿ. Stadium ಒಳಗಡೆ ಮಾತ್ರವಲ್ಲಾ ಹೊರಗಡೆ ಕೂಡ Gentleman ರೀತಿ ವರ್ತಿಸಿದಿರಿ. ಅನೇಕ ಕ್ರಿಕೆಟ್ ಆಟಗಾರರಿಗೆ ಕ್ರಿಕೆಟ್ ಆಡಲು ಸ್ಪೂರ್ತಿಆದಿರಿ. ಸೂರ್ಯ ಹುಟ್ಟಿದ ಮೇಲೆ ಮುಳುಗಲೇಬೇಕು, ಹಾಗೆ ಎಷ್ಟೇ ದೊಡ್ಡ ಆಟಗಾರ ಇರಲಿ ಕೊನೆಗೆ ನಿವೃತ್ತಿ ಕೊಡಲೇಬೇಕು. ಸತತ ೨೩ ವರ್ಷ ಅದ್ಬುತ ಬ್ಯಾಟಿಂಗ್ ಮಾಡಿ ಅನೇಕ ಅಮೋಘ ಗೆಲುವುಗಳನ್ನು ತಂದು ವಿಶ್ವದೆಲ್ಲೆಡೆ ಭಾರತದ ತ್ರಿವರ್ಣ ಧ್ವಜ ಹಾರುವಂತೆ ಮಾಡಿದ್ದಕ್ಕೆ ನಿಮಗೊಂದು ಧನ್ಯವಾದ. 
ವಿಶ್ವದ ಘಟಾನುಘಟಿ ಬೌಲರ್ ಗಳಿಗೆ ನಿದ್ದೆಗೆಡುವಂತೆ ಮಾಡಿದ ನಿಮ್ಮ Straight Drive ಇನ್ನು ಕೇವಲ ನೆನಪಷ್ಟೆ.

Mar 23, 2012


ನಿಮಗೂ ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಭಾಶಯಗಳು 
ಈ ಹೊಸ ವರುಷ ನಿಮ್ಮ ಬಾಳಲ್ಲಿ ಹೊಸ ಹರುಷ ತರಲಿ ಎಂದು ಹಾರೈಸುವ 

Wish you and your family a very happy UGADI

-
Deepak

Jan 2, 2012

Happy New Year

Wish You Happy New Year

Aug 18, 2011

ವಿಜಾಪುರ


ಮೊನ್ನೆಯಷ್ಟೇ ವಿಜಾಪುರದಿಂದ ಬಂದೆ... ನನ್ನ ತಂದೆಗೆ ವಿಜಾಪುರಕ್ಕೆ ವರ್ಗವಾಗಿರುವ ಕಾರಣ ನನಗೆ ವಿಜಾಪುರ ನೋಡಲು ಅವಕಾಶ ಸಿಕ್ಕಿದೆ ಜೊತೆಗೆ ಅಲ್ಲಿನ ಇತಿಹಾಸ ಪ್ರಸಿದ್ದ ಸ್ಮಾರಕಗಳನ್ನು ನೋಡುವ ಅವಕಾಶ ಕೂಡ ಸಿಕ್ಕಿದೆ.

 ಹಿಂದೆ '' ವಿಜಯಪುರ '' ಎಂದು ಕರೆಸಿಕೊಂಡ ವಿಜಾಪುರವನ್ನು '' ಕಲ್ಯಾಣದ ಚಾಲುಕ್ಯರು '' ಸ್ಥಾಪಿಸಿದರು. ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಗಾದ ವಿಜಾಪುರ ನಂತರ ಮರಾಠ ಮತ್ತು ಬ್ರಿಟಿಷರ ಕೈಗೆ ಬಂತು. 

ಇದು ಕರ್ನಾಟಕದ ಗಡಿ ಭಾಗವಾಗಿದ್ದು. ಮಹಾರಾಷ್ಟ್ರದೊಂದಿಗೆ ಗಾಡಿಯನ್ನು ಹಂಚಿಕೊಂಡಿದೆ.  ಈ ಜಿಲ್ಲೆಯಲ್ಲಿ ೫ ನದಿಗಳು ಹರಿಯುವದರಿಂದ ಇದಕ್ಕೆ '' ಪಂಚನದಿಗಳ ಬೀಡು '' ಎಂದು ಕರೆಯುತ್ತಾರೆ. 

'' ಕಾಯಕವೇ ಕೈಲಾಸ '' ಎಂದ ಬಸವಣ್ಣ ಹುಟ್ಟಿದ ಊರು ಬಸವನ ಬಾಗೇವಾಡಿ ವಿಜಾಪುರದಲ್ಲಿದೆ. 

ಇಲ್ಲಿನ ಇತಿಹಾಸ ಪ್ರಸಿದ್ದ ಸ್ಥಳಗಳು ಇಂತಿವೆ :

ಗೋಲ್ ಗುಂಬಜ್ : ಇದು ಮಹಮದ್ ಆದಿಲ್ ಶಾ ಗೋರಿಯಾಗಿ ಕಟ್ಟಲಾದ ಸ್ಮಾರಕ. ಇದು ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್. ಇದರ ವಿಶೇಷ ಆಕರ್ಷಣೆಯೆಂದರೆ ಇದರೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುತ್ತದೆ.

ಇತರ ಆಕರ್ಷಣೆಗಳು : ಇಬ್ರಾಹಿಮ್ ರೌಜಾ, ಬಾರಾ ಕಮಾನು, ಸಂಗೀತ ಮಹಲ್.







ಹೆಚ್ಚಿನ ಚಿತ್ರಗಳನ್ನು ನೋಡಲು ಈ ಲಿಂಕನ್ನು ಕ್ಲಿಕ್ಕಿಸಿ 




Mar 31, 2011

INDIA vs Pakistan


ನಿನ್ನೆ ಭಾರತ ತನ್ನ ಕಟ್ಟಾ ಎದುರಾಳಿ ಪಾಕಿಸ್ತಾನವನ್ನು ಅತ್ಯಂತ ರೋಮಾಂಚಕಾರಿಯಾಗಿ ಸೋಲಿಸಿ ಈ ವಿಶ್ವ ಕಪ್ ನ ಫೈನಲ್ ಗೆ ಲಗ್ಗೆ ಇಟ್ಟಿದೆ. 

ಭಾರತ ಪಾಕಿಸ್ತಾನ ಪಂದ್ಯ ಅಂದರೆ ಯಾವಾಗಲೂ high tension ಪಂದ್ಯಗಳು. ಅದರಲ್ಲೂ ಈ ಪಂದ್ಯ ಸೆಮಿ ಫೈನಲ್. ಭಾರತ ಪಾಕಿಸ್ತಾನ ಪಂದ್ಯ ಅಂದರೆ ಹಣ ಹೊಳೆಯಾಗಿ ಹರಿಯುತ್ತದೆ .ಸಾವಿರಾರು ಕೋಟಿ ರೂಪಾಯಿ ಬೆಟ್ಟಿಂಗ್ ಸಾಮಾನ್ಯ. ಯಾವುದೇ ದೇಶದಲ್ಲಿ ನಡೆದರೂ ಕ್ರೀಡಾಂಗಣಗಳು ತುಂಬಿ ತುಳುಕುತ್ತವೆ. ವೀಕ್ಷಕರ ಕೂಗಾಟ, ಚೀರಾಟ ಗಳ ಮದ್ಯೆ ಕ್ರಿಕೆಟ್ ಆಡುವುದು ಯಾವ ತಂಡಕ್ಕೂ ಸವಾಲೇ ಸರಿ... ಭಾರತ ಪಾಕಿಸ್ತಾನ ಗಳ ಪಂದ್ಯದಲ್ಲಿ ತಮ್ಮ ದೇಶ ಸೋಲುವುದನ್ನು ಆ ದೇಶದ ಜನರು ಎಂದಿಗೂ ಸಹಿಸುವುದಿಲ್ಲ. ಯಾವ ತಂಡ ಈ ಎಲ್ಲಾ Pressure ಮೆಟ್ಟಿ ನಿಲ್ಲುವುದೋ ಅದೇ ಜಯಿಸುತ್ತದೆ. 

ಭಾರತ ಪಾಕಿಸ್ತಾನ ಪಂದ್ಯ ಅಂದ್ರೆ ಅಲ್ಲಿ ಪರಸ್ಪರ ಬಯ್ಯುವುದು, ಕೆಣಕುವುದು ಸಾಮಾನ್ಯ ಸಂಗತಿ. ಜನರೂ ಕೂಡ ಎದುರಾಳಿ ತಂಡದ ಆಟಗಾರರನ್ನು ಕೆಣಕುವುದು ಇದೆ. ಭಾರತ ಪಾಕಿಸ್ತಾನ ಪಂದ್ಯ ಅಂದ್ರೆ ಸಾಮಾನ್ಯವಾಗಿ ನೆನಪಿಗೆ ಬರುವುದು ಬೆಂಗಳೂರಿನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯ. ಪಾಕಿಸ್ತಾನದ ನಾಯಕ ಅಮೀರ್ ಸೋಹೈಲ್ ನಮ್ಮ ವೆಂಕಟೇಶ್ ಪ್ರಸಾದ್ ಗೆ ಬೌಂಡರಿ ಬಾರಿಸಿ ಕೆಣಕಿದ್ದು, ನಂತರದ ಎಸೆತದಲ್ಲೇ ಸೋಹೈಲ್ ರನ್ನು ಬೌಲ್ಡ್ ಮಾಡಿದ್ದು ಯಾವತ್ತಿಗೂ ಕ್ರಿಕೆಟ್ ಪ್ರೇಮಿ ಮರೆಯಲಾರ.

ನಿನ್ನೆ ನಡೆದ ಪಂದ್ಯ ಅದಕ್ಕಿಂತ ಮಹತ್ವದ್ದಾಗಿತ್ತು. ಫೈನಲ್ ಗೆ ಹೋಗಲು ಎರಡು ತಂಡಗಳು ಮದಗಜಗಳಂತೆ ಕಾದಾಡುವುದು ಖಚಿತವಾಗಿತ್ತು. ಭಾರತಕ್ಕೆ ತನ್ನದೇ ದೇಶದಲ್ಲಿ ಆಡುವ ಅನುಕೂಲವಿತ್ತು. ಎರಡು ದೇಶದ ಜನರಿಗೆ ತಮ್ಮ ನೆಚ್ಚಿನ ತಂಡ ವಿಶ್ವ ಕಪ್ ಫೈನಲ್ ಗೆಲ್ಲದಿದ್ದರೂ ಪರವಾಗಿಲ್ಲ, ಈ ಪಂದ್ಯ ಗೆಲ್ಲಬೇಕು. ತಮ್ಮ ತಂಡ ಸೋಲುವುದನ್ನು ಯಾರೂ ಸಹಿಸಲಾರರು. 

ಅನೇಕ ವರ್ಷಗಳ ನಂತರ ನಡೆಯುತ್ತಿರುವ ಈ  ಕಟ್ಟಾ ವಿರೋಧಿಗಳ ಪಂದ್ಯದ ಬಗ್ಗೆ ಜನ ಎಷ್ಟು ಹುಚ್ಚಿಗೆ ಬಿದ್ದಿದ್ದರೆಂದರೆ, ಆಫೀಸಿಗೆ ರಜಾ ಹಾಕಿದ್ದರು. ಕೆಲವು ಕಂಪನಿ ಗಳು ತಮ್ಮ ಉದ್ಯೋಗಿಗಳಿಗೋಸ್ಕರ ಮ್ಯಾಚ್ ನ live telecast ಅನ್ನು ಕಂಪನಿ ಅಲ್ಲೇ ವ್ಯವಸ್ತೆ ಮಾಡಿದ್ದವು. ಅಂಗಡಿಗಳು ಮುಚ್ಚಿದ್ದವು. ರೋಡುಗಳು, ಸಿನೆಮಾ ಥಿಯೇಟರ್ ಗಳು ಖಾಲಿ ಹೊಡೆಯುತ್ತಿದ್ದವು 

ಅತ್ಯಂತ ರೋಮಾಂಚಕಾರಿಯಾಗಿ ನಡೆದ ಈ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ೨೯ ರನ್ ಗಳಿಂದ ಸೋಲಿಸಿ ಮುಂಬೈ ಗೆ ತನ್ನ ಟಿಕೆಟ್ ಬುಕ್ ಮಾಡಿತು. ಪಾಕಿಸ್ತಾನ ಕ್ಯಾಚ್ ಜೊತೆ ಮ್ಯಾಚ್ ಅನ್ನೂ ಕೈಚೆಲ್ಲಿತ್ತು . ಈ ಪಂದ್ಯ ನೋಡಲು ಭಾರತ ಮತ್ತು ಪಾಕಿಸ್ತಾನದ ಪ್ರಧಾನಿ ಯಿಂದ ಹಿಡಿದು ಅನೇಕ celebrities ಬಂದಿದ್ದರು. 

ಜನರಿಗೆ ಭಾರತ ಯುದ್ದವೇ ಗೆದ್ದಷ್ಟು ಖುಷಿಯಾಗಿ ರಸ್ತೆಗಿಳಿದು ಹುಚ್ಚೆದ್ದು ಕುಣಿದು ವಿಜಯೋತ್ಸವ ಆಚರಿಸಿದರು. 

ಇನ್ನುಯಾವಾಗ ಭಾರತ ಮತ್ತು ಪಾಕಿಸ್ತಾನ ಗಳ ನಡುವೆ ಪಂದ್ಯ ನಡೆಯುವುದೋ? 

ಇನ್ನೂ ಎರಡೇ ದಿನಕ್ಕೆ ಭಾರತ ಮತ್ತು ಶ್ರೀಲಂಕ ಮುಂಬೈನಲ್ಲಿ ವಿಶ್ವ ಕಪ್ ಗೆಲ್ಲಲು ಫೈನಲ್ನಲ್ಲಿ ಕಾದಾಡಲಿವೆ. ಮುಂಬೈ ನಲ್ಲಿ ಲಂಕಾ ದಹನ ಆಗುವುದೇ??? ಸಚಿನ್ ತಮ್ಮ home ground ನಲ್ಲಿ ೧೦೦ ನೇ ಶತಕ ಗಳಿಸುವರೇ??

Mar 21, 2011

ವಿಶ್ವಕಪ್ 2011 ಭಾಗ 2


ವಿಶ್ವ ಕಪ್ ಲೀಗ್ ಪಂದ್ಯಗಳು ಮುಗಿದಿವೆ. ವಿಶ್ವ ಕ್ರಿಕೆಟ್ ನ  ಬಲಿಷ್ಠ ತಂಡಗಳೇ ಕ್ವಾರ್ಟರ್ ಫೈನಲ್ ನಲ್ಲಿ ಭೇಟಿಯಾಗಲಿವೆ. 
ಭಾರತ ವಿಶ್ವವಿಜೇತರಾದ ಆಸ್ಟ್ರೇಲಿಯಾ ವಿರುದ್ದ ಕ್ವಾರ್ಟರ್ ಫೈನಲ್ ಆಡಲಿದೆ. ಆಸ್ಟ್ರೇಲಿಯಾ ಈಗ ಮೊದಲಿನ ಅಜೇಯ ತಂಡವಾಗಿ ಉಳಿದಿಲ್ಲಾ, ಅದನ್ನ ಶ್ರೀಲಂಕ, ಪಾಕಿಸ್ತಾನ, ಇಂಗ್ಲೆಂಡ್ ಅಷ್ಟೇ ಏಕೇ ಭಾರತ ಕೂಡ ಅವರ ದೇಶದಲ್ಲಿ ಸೋಲಿಸಿದ್ದಾರೆ. 

೧೯೯೬ ರ ವಿಶ್ವ ಕಪ್ ನಲ್ಲಿ ಭಾರತ ಕ್ವಾರ್ಟರ್ ಫೈನಲ್ ನಲ್ಲಿ ಪಾಕಿಸ್ತಾನದ ವಿರುದ್ದ ಬೆಂಗಳೂರಿನಲ್ಲಿ ಗೆದ್ದಿತ್ತು. ಈ ಸಲ ಬಲಿಷ್ಠ ಆಸ್ಟ್ರೇಲಿಯಾ ಎದುರಾಳಿ. ಈ ತಂಡದ ವಿಜೇತರು ಪಾಕಿಸ್ತಾನ ಮತ್ತು ವೆಸ್ಟ್ ಇಂಡಿಸ ಪಂದ್ಯದ ವಿಜೇತರನ್ನು ಎದುರಿಸಲಿವೆ. ಎಲ್ಲರು ಭಾರತ ಆಸ್ಟ್ರೇಲಿಯಾವನ್ನು ಸೋಲಿಸಿ ಮತ್ತು ಪಾಕಿಸ್ತಾನ ವೆಸ್ಟ್ ಇಂಡಿಸ ತಂಡವನ್ನು ಸೋಲಿಸಿ ಸೆಮಿ ಫೈನಲ್ ನಲ್ಲಿ ಎದುರಿಸುವಂತಾಗಬೇಕು ಎಂದು ಆಶಿಸುತ್ತಿದ್ದಾರೆ. 

ಭಾರತಕ್ಕೆ ಬ್ಯಾಟಿಂಗ್ ಗಿಂತ ಬೌಲಿಂಗೆ ಚಿಂತೆಯ ವಿಷಯವಾಗಿದೆ. ಜಹೀರ್ ಖಾನ್ ಒಬ್ಬರೇ ಟ್ರಂಪ್ ಕಾರ್ಡ್ ಬೌಲರ್ ಆಗಿದ್ದಾರೆ. ಹರ್ಭಜನ್, ನೆಹ್ರಾ, ಮುನಾಫ್ , ಚಾವ್ಲಾ ಎಲ್ಲಾರೂ ಫಾರ್ಮ್ ಕಳೆದುಕೊಂಡಿದ್ದಾರೆ.  ಯುವರಾಜ್ ಚನ್ನಾಗಿ ಬೌಲಿಂಗ್ ಮಾಡುತ್ತಿರುವುದು ಭಾರತಕ್ಕೆ ಅನುಕೂಲವಾಗಿದೆ. 

ಬ್ಯಾಟಿಂಗ್ ನಲ್ಲಿ  ಭಾರತದಷ್ಟು ಅದ್ಭುತವಾದ ಬ್ಯಾಟಿಂಗ್ ಲೈನ್ ಅಪ್ ಯಾವ ತಂಡದಲ್ಲೂ ಇಲ್ಲಾ , ಆದರು ಮೊನ್ನೆ ದಕ್ಷಿಣ ಆಫ್ರಿಕಾ ವಿರುದ್ದ ೨೯ ರನ್ ಗೆ ೯ ವಿಕೆಟ್ ಕಳೆದುಕೊಂಡಿದ್ದು ಇದೇ ಬ್ಯಾಟಿಂಗ್ ಲೈನ್ ಅಪ್ . ಸಚಿನ್ - ಸೆಹ್ವಾಗ್ ಉತ್ತಮ ಆರಂಭ ಕೊಟ್ಟರೂ ಉಳಿದವರು ಅದನ್ನು ಮುಂದುವರಿಸಿಕೊಂಡು ಹೋಗಲು ವಿಫಲರಾಗುತ್ತಿದ್ದಾರೆ. 

ಆಸ್ಟ್ರೇಲಿಯಾ ಗೆ ಸಚಿನ್ ಎಂದರೆ ಯಾವಾಗಲೂ ಭಯ. ಸಚಿನ್ ಆಸ್ಟ್ರೇಲಿಯಾ ವಿರುದ್ಧ ೯ ಶತಕ ಗಳಿಸಿದ್ದಾರೆ. ಅವರ ಶತಕ ಗಳ ಶತಕಕ್ಕೆ ಇನ್ನೂ ಒಂದೇ ಒಂದು ಶತಕ ಬಾಕಿ ಇದೆ. ಅದನ್ನು ಅವರು ಆಸ್ಟ್ರೇಲಿಯಾ ವಿರುದ್ಧವೇ ಮಾಡುತ್ತಾರೆ ಅಂತ ನಾವೆಲ್ಲರೂ ಕಾದುಕುಳಿತಿದ್ದೇವೆ. ಈ ವಿಶ್ವ ಕಪ್ ನಲ್ಲಿ ಅವರು ಭರ್ಜರಿ ಫಾರ್ಮ್ ನಲ್ಲಿದ್ದರೆ. ಅವರು ಶತಕ ಗಳಿಸಿ ಭಾರತಕ್ಕೆ ವಿಶ್ವ ಕಪ್  ತಂದುಕೊಡಲಿ ಅಂತ ಹಾರೈಸುತ್ತೇವೆ