ನಿನ್ನೆ ಭಾರತ ತನ್ನ ಕಟ್ಟಾ ಎದುರಾಳಿ ಪಾಕಿಸ್ತಾನವನ್ನು ಅತ್ಯಂತ ರೋಮಾಂಚಕಾರಿಯಾಗಿ ಸೋಲಿಸಿ ಈ ವಿಶ್ವ ಕಪ್ ನ ಫೈನಲ್ ಗೆ ಲಗ್ಗೆ ಇಟ್ಟಿದೆ.
ಭಾರತ ಪಾಕಿಸ್ತಾನ ಪಂದ್ಯ ಅಂದರೆ ಯಾವಾಗಲೂ high tension ಪಂದ್ಯಗಳು. ಅದರಲ್ಲೂ ಈ ಪಂದ್ಯ ಸೆಮಿ ಫೈನಲ್. ಭಾರತ ಪಾಕಿಸ್ತಾನ ಪಂದ್ಯ ಅಂದರೆ ಹಣ ಹೊಳೆಯಾಗಿ ಹರಿಯುತ್ತದೆ .ಸಾವಿರಾರು ಕೋಟಿ ರೂಪಾಯಿ ಬೆಟ್ಟಿಂಗ್ ಸಾಮಾನ್ಯ. ಯಾವುದೇ ದೇಶದಲ್ಲಿ ನಡೆದರೂ ಕ್ರೀಡಾಂಗಣಗಳು ತುಂಬಿ ತುಳುಕುತ್ತವೆ. ವೀಕ್ಷಕರ ಕೂಗಾಟ, ಚೀರಾಟ ಗಳ ಮದ್ಯೆ ಕ್ರಿಕೆಟ್ ಆಡುವುದು ಯಾವ ತಂಡಕ್ಕೂ ಸವಾಲೇ ಸರಿ... ಭಾರತ ಪಾಕಿಸ್ತಾನ ಗಳ ಪಂದ್ಯದಲ್ಲಿ ತಮ್ಮ ದೇಶ ಸೋಲುವುದನ್ನು ಆ ದೇಶದ ಜನರು ಎಂದಿಗೂ ಸಹಿಸುವುದಿಲ್ಲ. ಯಾವ ತಂಡ ಈ ಎಲ್ಲಾ Pressure ಮೆಟ್ಟಿ ನಿಲ್ಲುವುದೋ ಅದೇ ಜಯಿಸುತ್ತದೆ.
ಭಾರತ ಪಾಕಿಸ್ತಾನ ಪಂದ್ಯ ಅಂದ್ರೆ ಅಲ್ಲಿ ಪರಸ್ಪರ ಬಯ್ಯುವುದು, ಕೆಣಕುವುದು ಸಾಮಾನ್ಯ ಸಂಗತಿ. ಜನರೂ ಕೂಡ ಎದುರಾಳಿ ತಂಡದ ಆಟಗಾರರನ್ನು ಕೆಣಕುವುದು ಇದೆ. ಭಾರತ ಪಾಕಿಸ್ತಾನ ಪಂದ್ಯ ಅಂದ್ರೆ ಸಾಮಾನ್ಯವಾಗಿ ನೆನಪಿಗೆ ಬರುವುದು ಬೆಂಗಳೂರಿನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯ. ಪಾಕಿಸ್ತಾನದ ನಾಯಕ ಅಮೀರ್ ಸೋಹೈಲ್ ನಮ್ಮ ವೆಂಕಟೇಶ್ ಪ್ರಸಾದ್ ಗೆ ಬೌಂಡರಿ ಬಾರಿಸಿ ಕೆಣಕಿದ್ದು, ನಂತರದ ಎಸೆತದಲ್ಲೇ ಸೋಹೈಲ್ ರನ್ನು ಬೌಲ್ಡ್ ಮಾಡಿದ್ದು ಯಾವತ್ತಿಗೂ ಕ್ರಿಕೆಟ್ ಪ್ರೇಮಿ ಮರೆಯಲಾರ.
ನಿನ್ನೆ ನಡೆದ ಪಂದ್ಯ ಅದಕ್ಕಿಂತ ಮಹತ್ವದ್ದಾಗಿತ್ತು. ಫೈನಲ್ ಗೆ ಹೋಗಲು ಎರಡು ತಂಡಗಳು ಮದಗಜಗಳಂತೆ ಕಾದಾಡುವುದು ಖಚಿತವಾಗಿತ್ತು. ಭಾರತಕ್ಕೆ ತನ್ನದೇ ದೇಶದಲ್ಲಿ ಆಡುವ ಅನುಕೂಲವಿತ್ತು. ಎರಡು ದೇಶದ ಜನರಿಗೆ ತಮ್ಮ ನೆಚ್ಚಿನ ತಂಡ ವಿಶ್ವ ಕಪ್ ಫೈನಲ್ ಗೆಲ್ಲದಿದ್ದರೂ ಪರವಾಗಿಲ್ಲ, ಈ ಪಂದ್ಯ ಗೆಲ್ಲಬೇಕು. ತಮ್ಮ ತಂಡ ಸೋಲುವುದನ್ನು ಯಾರೂ ಸಹಿಸಲಾರರು.
ಅನೇಕ ವರ್ಷಗಳ ನಂತರ ನಡೆಯುತ್ತಿರುವ ಈ ಕಟ್ಟಾ ವಿರೋಧಿಗಳ ಪಂದ್ಯದ ಬಗ್ಗೆ ಜನ ಎಷ್ಟು ಹುಚ್ಚಿಗೆ ಬಿದ್ದಿದ್ದರೆಂದರೆ, ಆಫೀಸಿಗೆ ರಜಾ ಹಾಕಿದ್ದರು. ಕೆಲವು ಕಂಪನಿ ಗಳು ತಮ್ಮ ಉದ್ಯೋಗಿಗಳಿಗೋಸ್ಕರ ಮ್ಯಾಚ್ ನ live telecast ಅನ್ನು ಕಂಪನಿ ಅಲ್ಲೇ ವ್ಯವಸ್ತೆ ಮಾಡಿದ್ದವು. ಅಂಗಡಿಗಳು ಮುಚ್ಚಿದ್ದವು. ರೋಡುಗಳು, ಸಿನೆಮಾ ಥಿಯೇಟರ್ ಗಳು ಖಾಲಿ ಹೊಡೆಯುತ್ತಿದ್ದವು
ಅತ್ಯಂತ ರೋಮಾಂಚಕಾರಿಯಾಗಿ ನಡೆದ ಈ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ೨೯ ರನ್ ಗಳಿಂದ ಸೋಲಿಸಿ ಮುಂಬೈ ಗೆ ತನ್ನ ಟಿಕೆಟ್ ಬುಕ್ ಮಾಡಿತು. ಪಾಕಿಸ್ತಾನ ಕ್ಯಾಚ್ ಜೊತೆ ಮ್ಯಾಚ್ ಅನ್ನೂ ಕೈಚೆಲ್ಲಿತ್ತು . ಈ ಪಂದ್ಯ ನೋಡಲು ಭಾರತ ಮತ್ತು ಪಾಕಿಸ್ತಾನದ ಪ್ರಧಾನಿ ಯಿಂದ ಹಿಡಿದು ಅನೇಕ celebrities ಬಂದಿದ್ದರು.
ಜನರಿಗೆ ಭಾರತ ಯುದ್ದವೇ ಗೆದ್ದಷ್ಟು ಖುಷಿಯಾಗಿ ರಸ್ತೆಗಿಳಿದು ಹುಚ್ಚೆದ್ದು ಕುಣಿದು ವಿಜಯೋತ್ಸವ ಆಚರಿಸಿದರು.
ಇನ್ನುಯಾವಾಗ ಭಾರತ ಮತ್ತು ಪಾಕಿಸ್ತಾನ ಗಳ ನಡುವೆ ಪಂದ್ಯ ನಡೆಯುವುದೋ?
ಇನ್ನೂ ಎರಡೇ ದಿನಕ್ಕೆ ಭಾರತ ಮತ್ತು ಶ್ರೀಲಂಕ ಮುಂಬೈನಲ್ಲಿ ವಿಶ್ವ ಕಪ್ ಗೆಲ್ಲಲು ಫೈನಲ್ನಲ್ಲಿ ಕಾದಾಡಲಿವೆ. ಮುಂಬೈ ನಲ್ಲಿ ಲಂಕಾ ದಹನ ಆಗುವುದೇ??? ಸಚಿನ್ ತಮ್ಮ home ground ನಲ್ಲಿ ೧೦೦ ನೇ ಶತಕ ಗಳಿಸುವರೇ??
No comments:
Post a Comment