Mar 21, 2011

ವಿಶ್ವಕಪ್ 2011 ಭಾಗ 2


ವಿಶ್ವ ಕಪ್ ಲೀಗ್ ಪಂದ್ಯಗಳು ಮುಗಿದಿವೆ. ವಿಶ್ವ ಕ್ರಿಕೆಟ್ ನ  ಬಲಿಷ್ಠ ತಂಡಗಳೇ ಕ್ವಾರ್ಟರ್ ಫೈನಲ್ ನಲ್ಲಿ ಭೇಟಿಯಾಗಲಿವೆ. 
ಭಾರತ ವಿಶ್ವವಿಜೇತರಾದ ಆಸ್ಟ್ರೇಲಿಯಾ ವಿರುದ್ದ ಕ್ವಾರ್ಟರ್ ಫೈನಲ್ ಆಡಲಿದೆ. ಆಸ್ಟ್ರೇಲಿಯಾ ಈಗ ಮೊದಲಿನ ಅಜೇಯ ತಂಡವಾಗಿ ಉಳಿದಿಲ್ಲಾ, ಅದನ್ನ ಶ್ರೀಲಂಕ, ಪಾಕಿಸ್ತಾನ, ಇಂಗ್ಲೆಂಡ್ ಅಷ್ಟೇ ಏಕೇ ಭಾರತ ಕೂಡ ಅವರ ದೇಶದಲ್ಲಿ ಸೋಲಿಸಿದ್ದಾರೆ. 

೧೯೯೬ ರ ವಿಶ್ವ ಕಪ್ ನಲ್ಲಿ ಭಾರತ ಕ್ವಾರ್ಟರ್ ಫೈನಲ್ ನಲ್ಲಿ ಪಾಕಿಸ್ತಾನದ ವಿರುದ್ದ ಬೆಂಗಳೂರಿನಲ್ಲಿ ಗೆದ್ದಿತ್ತು. ಈ ಸಲ ಬಲಿಷ್ಠ ಆಸ್ಟ್ರೇಲಿಯಾ ಎದುರಾಳಿ. ಈ ತಂಡದ ವಿಜೇತರು ಪಾಕಿಸ್ತಾನ ಮತ್ತು ವೆಸ್ಟ್ ಇಂಡಿಸ ಪಂದ್ಯದ ವಿಜೇತರನ್ನು ಎದುರಿಸಲಿವೆ. ಎಲ್ಲರು ಭಾರತ ಆಸ್ಟ್ರೇಲಿಯಾವನ್ನು ಸೋಲಿಸಿ ಮತ್ತು ಪಾಕಿಸ್ತಾನ ವೆಸ್ಟ್ ಇಂಡಿಸ ತಂಡವನ್ನು ಸೋಲಿಸಿ ಸೆಮಿ ಫೈನಲ್ ನಲ್ಲಿ ಎದುರಿಸುವಂತಾಗಬೇಕು ಎಂದು ಆಶಿಸುತ್ತಿದ್ದಾರೆ. 

ಭಾರತಕ್ಕೆ ಬ್ಯಾಟಿಂಗ್ ಗಿಂತ ಬೌಲಿಂಗೆ ಚಿಂತೆಯ ವಿಷಯವಾಗಿದೆ. ಜಹೀರ್ ಖಾನ್ ಒಬ್ಬರೇ ಟ್ರಂಪ್ ಕಾರ್ಡ್ ಬೌಲರ್ ಆಗಿದ್ದಾರೆ. ಹರ್ಭಜನ್, ನೆಹ್ರಾ, ಮುನಾಫ್ , ಚಾವ್ಲಾ ಎಲ್ಲಾರೂ ಫಾರ್ಮ್ ಕಳೆದುಕೊಂಡಿದ್ದಾರೆ.  ಯುವರಾಜ್ ಚನ್ನಾಗಿ ಬೌಲಿಂಗ್ ಮಾಡುತ್ತಿರುವುದು ಭಾರತಕ್ಕೆ ಅನುಕೂಲವಾಗಿದೆ. 

ಬ್ಯಾಟಿಂಗ್ ನಲ್ಲಿ  ಭಾರತದಷ್ಟು ಅದ್ಭುತವಾದ ಬ್ಯಾಟಿಂಗ್ ಲೈನ್ ಅಪ್ ಯಾವ ತಂಡದಲ್ಲೂ ಇಲ್ಲಾ , ಆದರು ಮೊನ್ನೆ ದಕ್ಷಿಣ ಆಫ್ರಿಕಾ ವಿರುದ್ದ ೨೯ ರನ್ ಗೆ ೯ ವಿಕೆಟ್ ಕಳೆದುಕೊಂಡಿದ್ದು ಇದೇ ಬ್ಯಾಟಿಂಗ್ ಲೈನ್ ಅಪ್ . ಸಚಿನ್ - ಸೆಹ್ವಾಗ್ ಉತ್ತಮ ಆರಂಭ ಕೊಟ್ಟರೂ ಉಳಿದವರು ಅದನ್ನು ಮುಂದುವರಿಸಿಕೊಂಡು ಹೋಗಲು ವಿಫಲರಾಗುತ್ತಿದ್ದಾರೆ. 

ಆಸ್ಟ್ರೇಲಿಯಾ ಗೆ ಸಚಿನ್ ಎಂದರೆ ಯಾವಾಗಲೂ ಭಯ. ಸಚಿನ್ ಆಸ್ಟ್ರೇಲಿಯಾ ವಿರುದ್ಧ ೯ ಶತಕ ಗಳಿಸಿದ್ದಾರೆ. ಅವರ ಶತಕ ಗಳ ಶತಕಕ್ಕೆ ಇನ್ನೂ ಒಂದೇ ಒಂದು ಶತಕ ಬಾಕಿ ಇದೆ. ಅದನ್ನು ಅವರು ಆಸ್ಟ್ರೇಲಿಯಾ ವಿರುದ್ಧವೇ ಮಾಡುತ್ತಾರೆ ಅಂತ ನಾವೆಲ್ಲರೂ ಕಾದುಕುಳಿತಿದ್ದೇವೆ. ಈ ವಿಶ್ವ ಕಪ್ ನಲ್ಲಿ ಅವರು ಭರ್ಜರಿ ಫಾರ್ಮ್ ನಲ್ಲಿದ್ದರೆ. ಅವರು ಶತಕ ಗಳಿಸಿ ಭಾರತಕ್ಕೆ ವಿಶ್ವ ಕಪ್  ತಂದುಕೊಡಲಿ ಅಂತ ಹಾರೈಸುತ್ತೇವೆ  

No comments:

Post a Comment