Aug 18, 2011

ವಿಜಾಪುರ


ಮೊನ್ನೆಯಷ್ಟೇ ವಿಜಾಪುರದಿಂದ ಬಂದೆ... ನನ್ನ ತಂದೆಗೆ ವಿಜಾಪುರಕ್ಕೆ ವರ್ಗವಾಗಿರುವ ಕಾರಣ ನನಗೆ ವಿಜಾಪುರ ನೋಡಲು ಅವಕಾಶ ಸಿಕ್ಕಿದೆ ಜೊತೆಗೆ ಅಲ್ಲಿನ ಇತಿಹಾಸ ಪ್ರಸಿದ್ದ ಸ್ಮಾರಕಗಳನ್ನು ನೋಡುವ ಅವಕಾಶ ಕೂಡ ಸಿಕ್ಕಿದೆ.

 ಹಿಂದೆ '' ವಿಜಯಪುರ '' ಎಂದು ಕರೆಸಿಕೊಂಡ ವಿಜಾಪುರವನ್ನು '' ಕಲ್ಯಾಣದ ಚಾಲುಕ್ಯರು '' ಸ್ಥಾಪಿಸಿದರು. ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಗಾದ ವಿಜಾಪುರ ನಂತರ ಮರಾಠ ಮತ್ತು ಬ್ರಿಟಿಷರ ಕೈಗೆ ಬಂತು. 

ಇದು ಕರ್ನಾಟಕದ ಗಡಿ ಭಾಗವಾಗಿದ್ದು. ಮಹಾರಾಷ್ಟ್ರದೊಂದಿಗೆ ಗಾಡಿಯನ್ನು ಹಂಚಿಕೊಂಡಿದೆ.  ಈ ಜಿಲ್ಲೆಯಲ್ಲಿ ೫ ನದಿಗಳು ಹರಿಯುವದರಿಂದ ಇದಕ್ಕೆ '' ಪಂಚನದಿಗಳ ಬೀಡು '' ಎಂದು ಕರೆಯುತ್ತಾರೆ. 

'' ಕಾಯಕವೇ ಕೈಲಾಸ '' ಎಂದ ಬಸವಣ್ಣ ಹುಟ್ಟಿದ ಊರು ಬಸವನ ಬಾಗೇವಾಡಿ ವಿಜಾಪುರದಲ್ಲಿದೆ. 

ಇಲ್ಲಿನ ಇತಿಹಾಸ ಪ್ರಸಿದ್ದ ಸ್ಥಳಗಳು ಇಂತಿವೆ :

ಗೋಲ್ ಗುಂಬಜ್ : ಇದು ಮಹಮದ್ ಆದಿಲ್ ಶಾ ಗೋರಿಯಾಗಿ ಕಟ್ಟಲಾದ ಸ್ಮಾರಕ. ಇದು ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್. ಇದರ ವಿಶೇಷ ಆಕರ್ಷಣೆಯೆಂದರೆ ಇದರೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುತ್ತದೆ.

ಇತರ ಆಕರ್ಷಣೆಗಳು : ಇಬ್ರಾಹಿಮ್ ರೌಜಾ, ಬಾರಾ ಕಮಾನು, ಸಂಗೀತ ಮಹಲ್.ಹೆಚ್ಚಿನ ಚಿತ್ರಗಳನ್ನು ನೋಡಲು ಈ ಲಿಂಕನ್ನು ಕ್ಲಿಕ್ಕಿಸಿ 
8 comments:

 1. Very good pictures. Thanks.
  Vivek

  ReplyDelete
 2. ನಾನು ಸುಮಾರು ೫ ವರ್ಷಗಳ ಹಿಂದೆ ಬಿಜಾಪುರಕ್ಕೆ ಹೋಗಿದ್ದೆ.
  ನಿಮ್ಮ ಚಿತ್ರಗಳು ಆ ನೆನಪುಗಳನೆಲ್ಲ ಮತ್ತೆ ಹಸುರಾಗಿಸಿದೆ. ಏನೋ ಖುಷಿ ಕೊಟ್ಟಿದೆ.
  ಚಿತ್ರಗಳು ತುಂಬಾ ಚೆನ್ನಾಗಿ ಬಂದಿವೆ.
  ಬಾರಾ ಕಮಾನಿನ ಕಪ್ಪು ಕಲ್ಲುಗಳಂತೂ ಚಿತ್ರಗಳಲ್ಲಿ ತುಂಬಾ ಚೆನ್ನಾಗಿ ಕಾಣ್ತಿವೆ.

  ReplyDelete
 3. great pix and well written blog!

  cheers!

  ReplyDelete
 4. Deepak.. super photos:)

  -sanjay masur

  ReplyDelete
 5. Good work of photography....pls elaborate a bit abt the places next time....

  ReplyDelete
 6. Thanks all.

  @:) - I will come with full information about the places.

  ReplyDelete
 7. Place is really very nice also the pics.. but it hurts to sea monuments are not preserved …

  maneesh shanbhag

  ReplyDelete